ದಿವ್ಯಾ ಸುರೇಶ್ ಅವರು ಒಬ್ಬ ಮಾಡೆಲ್ ಮತ್ತು ನಟಿ. ಇವರು ಕನ್ನಡ ಮತ್ತು ತೆಲುಗಿನ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. == ಆರಂಭಿಕ ಜೀವನ == ಮಾಡೆಲ್, ನಟಿ ಆದ ದಿವ್ಯಾ ಸುರೇಶ್ ಅವರು ಕನ್ನಡ ಧಾರಾವಾಹಿ "ನನ್ನ ಹೆಂಡ್ತಿ ಎಂ.ಬಿ.ಬಿ.ಎಸ್" ಮತ್ತು "ಜೋಡಿ ಹಕ್ಕಿ" ಗಳಲ್ಲಿ ನಟಿಸಿದ್ದಾರೆ. ವೃತ್ತಿಯಲ್ಲಿ ಮಾಡೆಲ್ ಆಗಿರುವ ಇವರು ೨೦೧೭ರ ಮಿಸ್ ಇಂಡಿಯಾ ಸೌತ್ ಪ್ರಶಸ್ತಿ ಗೆದ್ದಿದ್ದಾರೆ. ತಮ್ಮ ಸಿನಿ ಪಯಣವನ್ನು ೨೦೧೭ರ ಕನ್ನಡ ಚಿತ್ರ "#೯, ಹಿಲ್ಟನ್ ಕ್ರಾಸ್" ಮೂಲಕ ಪ್ರಾರಂಭಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ವೃತ್ತಿಪರ ಕಬಡ್ಡಿ ಆಟಗಾರ್ತಿಯಾಗಿದ್ದ ದಿವ್ಯಾ ಅವರು ಕರ್ನಾಟಕ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದ ರಿಯಾಲಿಟಿ ಶೋ "ಬಿಗ್ ಬಾಸ್ ೮" ರ ಮೂಲಕ ಇವರು ಪ್ರಖ್ಯಾತರಾದರು. ಇವರು ಬಿಗ್ ಬಾಸ್ ಎಂಟರ ಟಾಪ್-೫ ನಲ್ಲಿ ಆಯ್ಕೆಯಾಗಿದ್ದರು. ಬಿಗ್ ಬಾಸ್ನ ನಂತರ ಕಲರ್ಸ್ ಕನ್ನಡ ವಾಹಿನಿಯ "ತ್ರಿಪುರ ಸುಂದರಿ" ಧಾರಾವಾಹಿಯಲ್ಲಿ ಇವರು ಅಭಿನಯಿಸಲಿದ್ದಾರೆ. . ಇವರು ತೆಲುಗಿನ ಚಲನಚಿತ್ರಗಳಾದ "ಡಿಗ್ರಿ ಕಾಲೇಜ್" ಮತ್ತು "ಟೆಂಪ್ಟ್ ರಾಜ" ಎಂಬ ವಯಸ್ಕರ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. == ದಿವ್ಯಾ ಸುರೇಶ್ ಅವರ ಅಭಿನಯದ ಚಲನಚಿತ್ರಗಳ ಪಟ್ಟಿ == == ಬಿಗ್ ಬಾಸ್ ೮ == ಕನ್ನಡದ ಕಲರ್ಸ್ ವಾಹಿನಿಯಲ್ಲಿ ಬರುವ "ಬಿಗ್ ಬಾಸ್" ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು ಮಂಜು ಪಾವಗಡ ಅವರೊಂದಿಗಿನ ಸ್ನೇಹ ಮತ್ತು ಪ್ರಶಾಂತ್ ಸಂಬರಗಿಯವರೊಂದಿಗಿನ ಮಾತುಕತೆಗಳಿಂದ ಪ್ರಸಿದ್ಧರಾಗಿದ್ದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ದಿವ್ಯಾ ಸುರೇಶ್ ಐ ಎಮ್ ಡಿ ಬಿನಲ್ಲಿ